Tuesday, October 6, 2009

ವಿರಹ

ಕಂಬನಿಗಳು ಕೆನ್ನೆ ಬಿಸಿಗೆ ತಾಗಿ ಆವಿಯಾಗುತ್ತಿರಲು,
ಅರೆತೆರೆದ ಕಿಟಕಿಯಿಂದ ಬಂದ ತಂಗಾಳಿ,
ಮುಂಗುರುಳ ಹಾರಿಸಿ ಮುಂದೋಡುತಾ,
ನಿನ್ನ ಪ್ರೀತಿ ಪಾಶದಲ್ಲಿ ಒದ್ದಾಡುತಿರುವ ನನ್ನ ಅಣಕಿಸುತ್ತಿತ್ತು..

.............

ಧ್ಯಾನ ಮಾಡಲೋಸುಗ, ನಾ ಕುಳಿತು
ಗಮನಿಸಿದೆ ನನ್ನ ಉಸಿರು,
ಅದು ಹೇಗೋ ನಾನರಿಯೆ
ಅದರಲ್ಲೂ ಬೆರೆತಿತ್ತು ನಿನ್ನ ಹೆಸರು...

ಬದುಕು

ನಾನು ನಾನಲ್ಲ, ಆತ್ಮಕ್ಕೆ ಸಾವಿಲ್ಲ,
ನಿನ್ನೆ, ಇಂದು, ನಾಳೆ,
ಕಳೆದಾಗ ಮುಗಿಯಿತು ಜೀವನ..
ಇದ ಅರಿತೂ ತನಗಾಗಿ ಬದುಕುವರೆಲ್ಲ..!!

Wednesday, March 4, 2009

ಮೌನ

ಒಳಗಿಂದೊಳಗೆ ಗಹಗಹಿಸಿ ನಗುವ
ಅತೀವ ವೇದನೆಯ Output...

ಪ್ರತಿಬಿಂಬ

ನಗೆಗಡಲಲ್ಲಿ ತೇಲುತ್ತಿರುವಾಗ..
ಬಣ್ಣ ನೀಲಾಕಾಶದ್ದೆಂದು,
ಕಣ್ಣಂಚ ತೇವ ಬಿಂಬಿಸುತ್ತಿತ್ತು...

ಕಂಬನಿ

ಕಗ್ಗತ್ತಲ ನೀರವತೆಯಲ್ಲಿ
ಸಂಗಾತಿಯಾಗಿ ಬಂದಿತ್ತು...

..............

ಇಂದೇಕೋ ಹೊಳೆಯುತ್ತಿಲ್ಲ
ಬರೆಯಲು...
ಸಾಕ್ಷಿಗಾಗಿ ತುಂಬಿವೆ
ಕಂಗಳು...

***************************

ಹೆಪ್ಪಾದ ಜೀವನದಲ್ಲಿ
ಕನಸುಗಳ ಕಡೆ-ಕಡೆದು
ತೆಗೆದ ಬೆಣ್ಣೆಯಂತೆ...

***************************

ನಗುವೆಂಬ ನದಿಯು
ಕವಲೊಡೆದು,
ಅಳುವೆಂಬ ಸಾಗರದೊಳು
ಲೀನವಾಯಿತು...