Wednesday, March 4, 2009

ಮೌನ

ಒಳಗಿಂದೊಳಗೆ ಗಹಗಹಿಸಿ ನಗುವ
ಅತೀವ ವೇದನೆಯ Output...

ಪ್ರತಿಬಿಂಬ

ನಗೆಗಡಲಲ್ಲಿ ತೇಲುತ್ತಿರುವಾಗ..
ಬಣ್ಣ ನೀಲಾಕಾಶದ್ದೆಂದು,
ಕಣ್ಣಂಚ ತೇವ ಬಿಂಬಿಸುತ್ತಿತ್ತು...

ಕಂಬನಿ

ಕಗ್ಗತ್ತಲ ನೀರವತೆಯಲ್ಲಿ
ಸಂಗಾತಿಯಾಗಿ ಬಂದಿತ್ತು...

..............

ಇಂದೇಕೋ ಹೊಳೆಯುತ್ತಿಲ್ಲ
ಬರೆಯಲು...
ಸಾಕ್ಷಿಗಾಗಿ ತುಂಬಿವೆ
ಕಂಗಳು...

***************************

ಹೆಪ್ಪಾದ ಜೀವನದಲ್ಲಿ
ಕನಸುಗಳ ಕಡೆ-ಕಡೆದು
ತೆಗೆದ ಬೆಣ್ಣೆಯಂತೆ...

***************************

ನಗುವೆಂಬ ನದಿಯು
ಕವಲೊಡೆದು,
ಅಳುವೆಂಬ ಸಾಗರದೊಳು
ಲೀನವಾಯಿತು...

Tuesday, October 16, 2007

ನಗು ನನ್ನ ನಲ್ಲೆ..

ಓ ನಲ್ಲೆ! ನೀನೇಕೆ ನಗಲೊಲ್ಲೆ?
ನಿನ್ನ ದುಗುಡ ನಾ ಬಲ್ಲೆ,
ಕೋಪವೇಕೆಂದೂ ಅರಿಯಬಲ್ಲೆ,
ಆಗಸ ಕೆಂಪಾದಾಗ ನಾ ಬರಲಿಲ್ಲ,
ಆಗಲೇ ಕಣ್ಗಳೆರಡೂ ಕೆಂಪಾದವಲ್ಲೆ?
ನೋಡು ನಿನಗೇನ ತಂದಿರುವೆ?
ಪರಿಮಳ ಬೀರುವ ಮಲ್ಲೆ!
ಅದೋ ನೋಡು ಚಂದಿರನಲ್ಲಿ,
ಬಂದನು ಬಾನಂಚಲ್ಲಿ,
ಇನ್ನೂ ಕೋಪವೇ ನನ್ನಲ್ಲಿ,
ಕಣ್ಣೀರೇಕೆ ಕಣ್ಗಳಲ್ಲಿ?
ನೋಡು ಚಂದ್ರನೂ ನಗುತಿಹ,
ಬೇಡ ಕೋಪ ನನ್ನೊಂದಿಗಿಂತಹ,
ಅರೆ! ನಕ್ಕಳಲ್ಲ,
ಒಮ್ಮೆಲೇ ಮಿನುಗಿದವು ನಕ್ಷತ್ರಗಳೆಲ್ಲ!!!
ಕೆಂಪು ಕಣ್ಣು ಹೋಗಿ ಕೆನ್ನೆಯಾಯಿತಲ್ಲ!!?

ಸಾಮ್ಯತೆ..

ಹನಿಹನಿಗಳು ಬಿದ್ದು
ಧರಣಿಯ ತಣಿಸುವಂತೆ,
ಕೆನ್ನೆ ಮೇಲಿನ ಕಂಬನಿ
ಮನವ ತಣಿಸುತ್ತಿತ್ತು..

ನೆನಪುಗಳು..

ಭರವಸೆಯ ಹಾದಿಯಲ್ಲಿ
ನಡೆಯುತ್ತಾ ನಡೆಯುತ್ತಾ,
ತಿರುಗಿನೋಡಿದಾಗ ಕಂಡ
ಹೆಜ್ಜೆಗುರುತುಗಳು...