Tuesday, October 16, 2007

ಸಂಬಂಧ..

ಅಪ್ಪನು ಹೇಳಿದ,
  ಮಗಳೇ ಈತ ನಿನ್ನ ಬಾಳಸಂಗಾತಿಯೆಂದು.
ಮಗಳು ಒಪ್ಪಿದಳು,
  ತಲೆ ತಗ್ಗಿಸಿ ನಿಂದು.
ಆದರೆ, ಅಮ್ಮನಿಗೆ ಕಂಡಿತ್ತು,
  ಮಗಳ ಕಣ್ಣಲ್ಲಿದ್ದ ಬಿಂದು..

3 comments:

Lanabhat said...

ಕೆಲವೊಮ್ಮೆ ಹಾಗಾಗುತ್ತದೆ ಆದರೆ ಈಗ ಕಾಲ ಬದಲಾಗಿದೆ ಅಲ್ವಾ

ಶ್ವೇತ said...

ಹೌದು.. ಕಾಲ ಬದಲಾಗಿದೆ.. ಅಮ್ಮ ಅಪ್ಪಂದಿರ ಕಣ್ಣ ಬಿಂದು ಕಾಣುದೆ ಕಷ್ಟ್ ಮಕ್ಕಳಿಗೆ ಅಲ್ವಾ?

"ಕೆಲವೊಮ್ಮೆ" ಯನ್ನು ಹಿಡಿದುಕೊಂಡು ಬರೆದದ್ದು.. :)

ಕುಕೂಊ.. said...

ಕಾಲ ಬದಲಾಗಿದೆ ರೀ....